ಕಾರಟಗಿ


Contributors to Wikimedia projects

Article Images

ಕಾರಟಗಿ

(ಭಾರತ) ಕರ್ನಾಟಕ ರಾಜ್ಯದ ಸ್ಥಳ


ಕಾರಟಗಿ ಪಟ್ಟಣವು ಕೊಪ್ಪಳ ಜಿಲ್ಲೆಯ ನೂತನ ತಾಲೂಕು ಕೇಂದ್ರ. ಇದು ಜಿಲ್ಲಾಕೇಂದ್ರ ಕೊಪ್ಪಳ ಯಿಂದ ಸರಿಸುಮಾರು 71.2Km ಇದೆ

ಇದು ಸುಮಾರು ೩೫೦೦೦ ಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ. ಇದನ್ನು ಕೊಪ್ಪಳದ ಭತ್ತದ ಕಣಜ ಎಂದು ಕರೆಯಲಾಗಿದೆ. ಇಲ್ಲಿ ೬೮ ಕ್ಕೂ ಹೆಚ್ಚಿನ ರೈಸ್ ಮಿಲ್ ಇವೆ. ಇಲ್ಲಿ ಏಷಿಯಾದಲ್ಲಿಯೇ ೨ ನೇ ಅತಿದೊಡ್ಡ ರೈಸ್ ಟೆಕ್ನಾಲಜಿ ಪಾರ್ಕ್ ಇಲ್ಲಿ ಸ್ತಾಪಿತವಾಗಿದೆ ಇದೆ.ಈ ಪಟ್ಟಣವು ರಾಯಚೂರು - ಗಿಣಿಗೇರಾ ರಾಜ್ಯ ಹೆದ್ದಾರಿ ೨೩ರ ಲ್ಲಿದೆ.ಕಾರಟಗಿ ತಾಲೂಕು ಸಿಂದನೂರು, ಗಂಗಾವತಿ, ಕನಕಗಿರಿ ಮತ್ತು ಸಿರುಗುಪ್ಪ ತಾಲೂಕುಗಳಿಂದ ಸುತ್ತುವರಿದಿದೆ. ಕಾರಟಗಿ ನಗರವು ಒಳ್ಳೆಯ ಸಾರಿಗೆ ಸಂಪರ್ಕವನ್ನು ಹೊಂದಿದೆ, ಇಲ್ಲಿಂದ ರಾಜ್ಯದ ರಾಜದಾನಿ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ರಾಯಚೂರು, ಸಿಂದನೂರು, ಗಂಗಾವತಿಯಂತ ವಾಣಿಜ್ಯ ನಗರಗಳು ,ಮಂತ್ರಾಲಯ, ದರ್ಮಸ್ತಳ, ಹಂಪಿ ಮುಂತಾದ ಪ್ರಸಿದ್ದ ಕ್ಸೇತ್ರಗಳಿಗೆ ಬಸ್ಸುಗಳ ಸೌಕರ್ಯವಿದೆ, ಹಾಗೇ ರಾಯಚೂರು-ಗಿಣಿಗೇರಾ ರಯ್ಲು ಯೋಜನೆಯ ಬಾಗವಾದ ಕಾರಟಗಿ ರಯ್ಲು ನಿಲ್ದಾಣ ಇತ್ತೀಚಿಗೆ ಕಾರ್ಯನಿರ್ವಹಿಸುತ್ತಿದೆ, ಕಾರಟಗಿಯಿಂದ ಬೆಂಗಳೂರಿನ ಯಶವಂತಪುರ ಮತ್ತು ಹುಬ್ಬಳ್ಳಿ ನಗರಗಳಿಗೆ ನೇರ ರಯ್ಲು ಸಂಪರ್ಕವಿದೆ..