ತೂಗುದೀಪ ಶ್ರೀನಿವಾಸ


Contributors to Wikimedia projects

Article Images

ಕನ್ನಡ ಚಿತ್ರರಂಗದಲ್ಲಿ ತೂಗುದೀಪ ಚಿತ್ರದ ಮೂಲಕ ಜನಪ್ರಿಯ ಖಳನಾಯಕರಾದರು. ತಮ್ಮ ಜೀವನವನ್ನು ಕನ್ನಡ ಚಲನಚಿತ್ರರಂಗದಲ್ಲಿ ಖಳನಾಯಕರಾಗಿ, ಸಹನಟರಾಗಿ, ಹಾಸ್ಯನಟರಾಗಿ ಹಾಗೂ ಪೋಷಕನಟರಾಗಿ ನಟನೆಗಳ ಮೂಲಕವೇ ಪ್ರಖ್ಯಾತರಾದವರು.ಚಾಲೆಂಜಿಂಗ್ ಸ್ಟಾರ್ ದರ್ಶನ್, ತೂಗುದೀಪ ಶ್ರಿನಿವಾಸ ಇವರ ಪುತ್ರ.

ತೂಗುದೀಪ ಶ್ರೀನಿವಾಸ

ಜನನ1943
ಮರಣ16 October 1995 (aged 51–52)
ರಾಷ್ಟ್ರೀಯತೆಭಾರತೀಯ
ವೃತ್ತಿನಟ
ಸಂಗಾತಿ(s)ಮೀನಾ
(1973–1995; his death)
ಮಕ್ಕಳುದರ್ಶನ್ ತೂಗುದೀಪ್
ದಿನಕರ್ ತೂಗುದೀಪ
ದಿವ್ಯಾ ತೂಗುದೀಪ

ತೂಗುದೀಪ ಶ್ರೀನಿವಾಸ ರವರು ಅವರ ತಂದೆ-ತಾಯಿಯ ೮ ಮಕ್ಕಳ ಪೈಕಿ 4ನೇಯ ಮುದ್ದು ಮಗ. ೧೯೪೩ರಲ್ಲಿ ಮುನಿಸ್ವಾಮಿ ಹಾಗೂ ಪಾರ್ವತಮ್ಮ ದಂಪತಿಗಳ ನಾಲ್ಕನೇಯ ಮಗನಾಗಿ ಹುಟ್ಟಿದರು. ಸಣ್ಣ ವಯಸ್ಸಿನಲ್ಲೇ ಅವರು ಅಪ್ಪಅಮ್ಮನನ್ನು ಕಳೆದುಕೊಂಡವರು. ಬಾಲ್ಯದ ದಿನಗಳಲ್ಲೇ ಇವರಿಗೆ ಸಿನಿಮಾ-ಚಿತ್ರರಂಗದ ಮೇಲೆ ತುಂಬಾ ಆಸಕ್ತಿ ಇತ್ತು. ಶಾಲಾ-ಕಾಲೇಜಿನಲ್ಲೂ ಕೂಡ ಅವರು ನಟಿಸುತ್ತಿದ್ದರು.೧೯೬೬ರಲ್ಲಿ ಮೂಡಿಬಂದ ಕೆ.ಎಸ್.ಎಲ್. ಸ್ವಾಮಿಯವರ ನಿರ್ಮಾಣದ, ಆರ್.ಜಿ. ಕೇಶವಮೂರ್ತಿಯವರ ನಿರ್ದೇಶನದ " ತೂಗುದೀಪ " ಎಂಬ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂತೆಯೇ " ತೂಗುದೀಪ ಶ್ರೀನಿವಾಸ " ಎಂಬ ಹೆಸರು ಬಂತು. ಒಂದರ ಮೇಲೊಂದರಂತೆ ಚಲನಚಿತ್ರಗಳು ತೂಗುದೀಪ ಶ್ರೀನಿವಾಸ ರವರ ಯಶಸ್ಸು ತಂದುಕೊಟ್ಟವು. ಅವರು ನಟಿಸಿದ ಚಲನಚಿತ್ರಗಳಲ್ಲಿ ಮೇಯರ್ ಮುತ್ತಣ್ಣ, ಬಂಗಾರದ ಪಂಜರ , ಗಂಧದ ಗುಡಿ , ಕಳ್ಳ ಕುಳ್ಳ, ವಸಂತ ಲಕ್ಷ್ಮಿ, ಸಾಹಸ ಸಿಂಹ ಪ್ರಮುಖವಾದವುಗಳು... ವರನಟ ಡಾ. ರಾಜ್ ಕುಮಾರ್ ರವರ ಬಹುತೇಕ ಚಲನಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ'ರವರು ಖಳನಟ-ಸಹನಟ-ಪೋಷಕ ನಟರಾಗಿ ನಟಿಸಿದ್ದಾರೆ.

  1. "Thoogudeepa Srinivas Actor". www.imdb.com/. http://www.imdb.com/name/nm2448004/?ref_=nmbio_ql. ;
 

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: