ನ್ಯಾಮತಿ


Contributors to Wikimedia projects

Article Images

ನ್ಯಾಮತಿಯು ದಾವಣಗೆರೆ ಜಿಲ್ಲೆಯ ಒಂದು ತಾಲ್ಲೂಕು. ಇದು ವ್ಯಾಪಾರ ವಹಿವಾಟಿಗೆ ಹೆಸರಾದ ಪಟ್ಟಣವಾಗಿದೆ.

ನ್ಯಾಮತಿ

ನ್ಯಾಮತಿ

village

Population

 (೨೦೧೧)

 • Total೯೨೮೮

ನ್ಯಾಮತಿ ಬಳಿ ಹಳೆಯ ಶಿಲಾಯುಗದ ನೆಲೆಯನ್ನು ಗುರುತಿಸಲಾಗಿದೆ. ಜಿಲ್ಲೆ ಪ್ರದೇಶ ಸಿಂಧವಾಡಿಯ ಸಿಂಧವರ ವಶದಲ್ಲಿದ್ಧಾಗ ಸೇವುಣರ ದಂಡನಾಯಕ ಶ್ರೀಧರನಿಗೂ ಡಾಕರೆಸನಿಗೂ ನಡುವೆ ನ್ಯಾಮತಿಯ ಬಳಿ ಯುದ್ಧವಾಯಿತು (1247). 1867ರಿಂದ 1882ರ ವರೆಗೆ ಇದು ಹೊನ್ನಾಳಿ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಅನಂತರ ಹೊನ್ನಾಳಿಯೇ ಆ ತಾಲ್ಲೂಕಿನ ಕಸಬೆಯಾಯಿತು.

ಪಶ್ಚಿಮಭಾಗದಲ್ಲಿರುವಂತೆ ನ್ಯಾಮತಿಯ ಕಡೆ ಕಾಡುಗಳಿಲ್ಲ ಮಲೆನಾಡಿಗೂ ಬಯಲುನಾಡಿಗೂ ನಡುವೆ ಇರುವ ನ್ಯಾಮತಿ ಒಂದು ವ್ಯಾಪಾರ ಸ್ಥಳ. ನ್ಯಾಮತಿ ಪೇಟೆ ದಿವಾನ್ ಪೂರ್ಣಯ್ಯನವರ ಕಾಲದಲ್ಲಿ ಸ್ಥಾಪಿತವಾಯಿತು. ಇಲ್ಲಿಂದ ಬಳ್ಳಾರಿ, ಧಾರವಾಡ ಮೊದಲಾದ ಸ್ಥಳಗಳಿಗೆ ಅಡಕೆ. ಬೆಲ್ಲ, ಧಾನ್ಯ ರಫ್ತಾಗುತ್ತವೆ. ನ್ಯಾಮತಿ-ಬೆಳಗುತ್ತಿ ನಡುವೆ ಫಲವತ್ತಾದ ಕಪ್ಪುಭೂಮಿಯಲ್ಲಿ ವಿಶೇಷವಾಗಿ ಹತ್ತಿ ಬೆಳೆಯುತ್ತದೆ. ಈ ಸುತ್ತಿನ ಇತರ ಬೆಳೆಗಳು ಭತ್ತ, ಜೋಳ, ಅಡಕೆ, ತೆಂಗು, ತರಕಾರಿಗಳನ್ನು, ನ್ಯಾಮತಿ ಯಿಂದ ಶಿವಮೊಗ್ಗ, ಹೊನ್ನಾಳಿ, ಶಿಕಾರಿಪುರ, ಸವಳಂಗ, ಕೊಪ್ಪ , ಶೃಂಗೇರಿ ,ಬಾಳೆಹೊನ್ನೂರು ,ಕಳಸಾ ,ಚಿಕ್ಕಮಂಗಳೂರು ತೀರ್ಥಹಳ್ಳಿ ,ಉಡುಪಿ ,ಮಂಗಳೂರು ಮೊದಲಾದ ಸ್ಥಳಗಳಿಗೆ ಕಳುಹಿಸಲಾಗುತ್ತದೆ. ನ್ಯಾಮತಿಯಲ್ಲಿ ಪ್ರೌಢಶಾಲೆ, ಜೂನಿಯರ್ ಕಾಲೇಜು, ಪ್ರಥಮ ದರ್ಜೆ ಕಾಲೇಜು ಸಮುದಾಯ ಆರೋಗ್ಯ ಕೇಂದ್ರ ರೈತರ ತರಕಾರಿ ಬೆಳೆಗಳನ್ನು ಮಾರಾಟ ಮಾಡಲು ಎಪಿಎಂಸಿ, ಪಟ್ಟಣ ಪಂಚಾಯಿತಿ ಕಾರ್ಯಾಲಯ, ತಾಲೂಕು ಪಂಚಾಯಿತಿ ಕಾರ್ಯಾಲಯ , ಉಪಖಜಾನೆ, ತಹಶೀಲ್ದಾರ್ ಕಾರ್ಯಾಲಯ ,ಪಶು ಆಸ್ಪತ್ರೆ, ಕೃಷಿ ಇಲಾಖೆ ಕಚೇರಿ 1918ರಲ್ಲಿ ಪೌರಸಭೆ ಸ್ಥಾಪಿತವಾಯಿತು. ಪ್ರತಿ ಶುಕ್ರವಾರ ಇಲ್ಲಿ ಸಂತೆ ಕೂಡುತ್ತದೆ.

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಗ್ರಾಮದಲ್ಲಿ ಜನಸಂಖ್ಯೆ 2011ರ ಜನಗಣತಿ ಪ್ರಕಾರ 9288 ಇದೆ. ಅದರಲ್ಲಿ 4676 ಪುರುಷರು ಮತ್ತು 4612 ಮಹಿಳೆಯರು ಇದ್ದಾರೆ. ಲಿಂಗಾನುಪಾತ ಸರಾಸರಿ ಸುಮಾರು 986(1000 ಪುರುಷರಿಗೆ) ಇದೆ.