ಶಬರಿಕೊಳ್ಳ


Contributors to Wikimedia projects

Article Images

ಶಬರಿಕೊಳ್ಳ

ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣ

ನಮ್ಮ ರಾಮದುರ್ಗವು ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ತಾಲೂಕುಗಳಲ್ಲಿ ಒಂದು, ಈ ಪಟ್ಟಣಕ್ಕೆ ರಾಮನಗರಿ, ಭುಜಬಲಗಡ, ಬೆಲ್ಲದ ನಾಡು, ಕೊಳ್ಳಗಳ ನಾಡು, ಪುರಾಣಕ್ಷೇತ್ರ ಎಂತೆಲ್ಲಾ ಜನರು ಕರೆಯುತ್ತಾರೆ.

ಶಬರಿಕೊಳ್ಳ ದೇವಸ್ಥಾನ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು

ಪ್ರಭು ಶ್ರೀರಾಮಚಂದ್ರನು ಲಕ್ಷ್ಮಣನ ಸಹಿತ ಶ್ರೀಕ್ಷೇತ್ರ ಶಬರಿಕೊಳ್ಳಕ್ಕೆ ಬಂದು, ಶಬರಿದೇವಿಗೆ ದರ್ಶನ ಕೊಟ್ಟಿದ್ದು ವಾಲ್ಮೀಕಿ ರಾಮಾಯಣದಲ್ಲಿದೆ. ಶಬರಿ ದೇವಾಲಯ ರಾಮಾಯಣ ಕಾಲದ ಘಟನೆಯಿಂದ ಪ್ರಸಿದ್ದಿ ಪಡೆದ ಪವಿತ್ರ ಯಾತ್ರಾ ಸ್ಥಳವೆಂದೇ ಸುಪ್ರಸಿದ್ಧಿ ಪಡೆದ ಪುರಾಣಕ್ಷೇತ್ರವಾಗಿದೆ. ತ್ರೇತಾಯುಗದಲ್ಲಿ ಶಬರಿಯು ರಾಮನ ಭಕ್ತೆಯಾಗಿರುತ್ತಾಳೆ. ರಾಮನ ನೋಡುವ ಸಲುವಾಗಿ ಹಾತೊರೆಯುತ್ತಿರುತ್ತಾಳೆ. ಒಂದು ಸಲ ರಾಮಲಕ್ಷ್ಮಣ ಹನುಮಂತನು ವನವಾಸದಿ ದಾರಿಯುದ್ದ ಹೋಗುತ್ತಿರುವಾಗ ಶಬರಿವನದತ್ತ ಹೋಗುತ್ತಾರೆ. ಶಬರಿದೇವಿ ಅವರಿಗೆ ತಿನ್ನಲು ಹಣ್ಣುಹಂಪಲನ್ನು ಕೊಟ್ಟು ಅವರ ದಣಿವನ್ನು ನೀಗಿಸುತ್ತಾಳೆ.ಅವಳ ಸೇವಾಮನೋಭಾವಕ್ಕೆ ಶ್ರೀರಾಮನು ಮೆಚ್ಚುತ್ತಾನೆ. ಆ ಸ್ಥಳವೇ ಈಗಿನ ರಾಮದುರ್ಗದಿಂದ ೧೫ ಕಿ.ಮಿ. ಅಂತರದಲ್ಲಿರುವ ಶಬರಿಕೊಳ್ಳದ ಶ್ರೀ ಶಬರಿದೇವಿಯ ದೇವಸ್ಥಾನ.

ಬೆಳಗಾವಿಯಿಂದ ೧೦೮ ಕಿ.ಮೀ., ರಾಮದುರ್ಗದಿಂದ ೧೫ ಕಿ.ಮೀ. ಸುರೇಬಾನದಿಂದ ೦೫ ಕಿ.ಮೀ. ಅಂತರದಲ್ಲಿದೆ. ರಾಮದುರ್ಗ ಸುರೇಬಾನ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಶಬರಿಕೊಳ್ಳ ಬಲ ಮಾರ್ಗದಲ್ಲಿ ಸಂಚರಿಸುತ್ತವೆ. ಈ ತಿರುವಿನಿಂದ ದೇವಾಲಯವರೆಗೂ ರಸ್ತೆ ಇದ್ದು ವಾಹನ ಸೌಕರ್ಯ ಕಡಿಮೆ. ಆದರೆ ನಡೆದುಕೊಂಡು ಇಲ್ಲವೇ ಖಾಸಗಿ ವಾಹನ ಅಥವಾ ಆಟೋ ರಿಕ್ಷಾ ಮೂಲಕ ೧.೫ ಕಿ.ಮೀ. ಹೋಗಬಹುದು.